Surprise Me!

Lord Ganesha Idols Damaged Due To Rain In Bellary District | Public TV

2022-08-29 1 Dailymotion

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಬಳ್ಳಾರಿಯಲ್ಲಿ ಅವಾಂತರ ಸೃಷ್ಟಿಸಿದೆ. ಇಲ್ಲಿನ ಅಲಿಪೂರದ ಹೊರವಲಯದಲ್ಲಿ ಗಣೇಶನ ಮೂರ್ತಿಗಳೇ ಮುಳುಗಿ ಹೋಗಿವೆ. ಕೊಲ್ಕತ್ತಾ ಮೂಲದ ಮೂರ್ತಿ ತಯಾರಕರು ಗಣೇಶ ಹಬ್ಬಕ್ಕಾಗಿ ನೂರಾರು ಮೂರ್ತಿ ತಯಾರಿಸಿದ್ರು. ತಡರಾತ್ರಿ ಸುರಿದ ಮಳೆ ಹಿನ್ನಲೆ ತಾತ್ಕಾಲಿಕ ಟೆಂಟ್‍ನಲ್ಲಿ ನೀರು ನುಗ್ಗಿದ ಪರಿಣಾಮ ನೂರಕ್ಕೂ ಹೆಚ್ಚು ಮೂರ್ತಿಗಳು ಅರ್ಧ ಭಾಗ ಮುಳುಗಿ ಹೋಗಿವೆ. ಮೂವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿರೋದು ಒಂದು ಕಡೆಯಾದ್ರೇ, ಆರ್ಡರ್ ಮಾಡಿದ ಸಂಘಟಕರಿಗೆ ಮೂರ್ತಿ ಹೇಗೆ ಕೊಡೋದು ಅನ್ನೋದೇ ದೊಡ್ಡ ಸಮಸ್ಯೆಯಾಗಿದೆ. ಇನ್ನು ಚಿಕಬಳ್ಳಾಪುರದಲ್ಲೂ ಮಳೆರಾಯ ವಿಘ್ನ ನಿವಾರಕನಿಗೆ ವಿಘ್ನ ತಂದಿದೆ. ನಗರದ ಬಿಬಿ ರಸ್ತೆಯ ಕೆಇಬಿ ಬಳಿ ಬೀದಿ ಬದಿಯಲ್ಲಿ ನೀರು ನುಗ್ಗಿ ಗಣೇಶನ ಮೂರ್ತಿಗಳೆಲ್ಲವೂ ಹಾಳಾಗಿದೆ. ಸಾವಿರಾರು ರೂಪಾಯಿ ಬಂಡವಾಳ ಹೂಡಿದ ವ್ಯಾಪಾರಿಗಳಿಗೆ ಸಂಕಷ್ಟಕ್ಕೀಡು ಮಾಡಿದೆ. ಮಳೆಯಿಂದ ಹಾಳಾದ ಗಣೇಶನ ಮೂರ್ತಿಗಳ ಕಂಡು ವ್ಯಾಪಾರಿಗಳು ಕಂಗಾಲಾಗಿದ್ದಾರೆ.

#publictv #raindamage #ganeshidol